ಹಾರಾಟವನ್ನು ಅನುಮಾನಿಸುತ್ತಿರುವ ಗಾಳಿಪಟ ನಾನು! ಕಾರಣ , ನನ್ನ ಮುಂದೆ ನಗುತಿರುವ ಆಗಸವಿದೆ! ನಾನು ಬಂದಿಸಲ್ಪಟ್ಟಿರುವ ದಾರ ನೀನೆ ? ಅಥವಾ, ನನ್ನ ಶಾಶ್ವತವಾಗಿ ಹಿಡಿದೆಳೆಯುವ ಕೈ ನೀನೆ? ತುಂಡರಿಸಿದಾಗ ಆಗುವ ನೋವದು ಅಪರಿಮಿತ, ಯಾರ ತಪ್ಪದು? ಕೈ ಚಾಚಿ ಕರೆಯುವ ಆಗಸದ್ದೋ? ನನ್ನ ತುಂಡರಿಸಿದ ದಾರದ್ದೋ? ಅಥವಾ, ಮಾಗದ ಈ ಪ್ರೀತಿಯದ್ದೋ?

..